Friday, April 24, 2015

ಅಮಾಯಕ ಶಾಲಾ ಬಾಲಕಿಯೊಬ್ಬರು ಬರೆದಿದ್ದ ನೂರಾರು ಪ್ರೇಮ ಬರಹಗಳಿಗೆ ಬರೆದ ಮುನ್ನುಡಿ


ಗುರುವಾಗಲ್ಲದಿದ್ದರು ಗೆಳೆಯನಾಗಿ, ಹಿರಿಯನಾಗಿ, ಹೀತೈಷಿಯಾಗಿ ಹೇಳುವುದಿಷ್ಟೇ ..... ನಿಮ್ಮ ಒಳಗಿರುವ ಒಲವಿನೆಡೆಗಿನ ಅವಸರದ ಅತೀವ ಆಸಕ್ತಿ, ಅನಾನುಭವಿ ಮನಸ್ಥಿತಿ  ಅನಿವಾರ್ಯವಲ್ಲದಿದ್ದರೂ ತಂದುಕೊಳ್ಳಲಿರುವ ಪರಿಸ್ಥಿತಿ ,  ಹಾಗು ಅರ್ಥವೇ  ಆಗದೇ  ಆಕರ್ಷಣೆಗೆ ಹುಟ್ಟುಕೊಳ್ಳುತ್ತಿರುವ  ಹುಸಿ ಪ್ರೀತಿ. ಇವೆವುಗಳು ನಿಮ್ಮ ಭಾಳ ಮೈತ್ರಿಯ  ಕಟ್ಟಿಕೊಡುವುದಿಲ್ಲ.
ಇಷ್ಟಕ್ಕೂ ನೈಜ ಪ್ರೀತಿಯೆಂಬುದು  ಮೊದಲಿಗೆ ನಿಮ್ಮ ಮೇಲೆಯೆ ಹುಟ್ಟಿಕೊಳ್ಳುವಂತದ್ದು. ಬಲಹೀನತೆಗಳ  ಮೆಟ್ಟಿ ನಿಲ್ಲುವಂತದ್ದು, ಬದುಕಿನ ಸಾಮರ್ಥ್ಯವ  ಗಟ್ಟಿಗೊಳಿಸುವಂತದ್ದು..... ಇಲ್ಲಿ ನಿಮ್ಮ ಮೇಲೆ ಅಂದರೆ ನೀವಲ್ಲ, ನಿಮ್ಮ ಹಿತವಲ್ಲ, ನಿಮ್ಮ ಬದುಕಷ್ಟೇ ಅಲ್ಲ.! ಅದು ತಂದೆಯ ನಿರೀಕ್ಷೆ, ತಾಯಿಯ ನಂಬಿಕೆ, ಸಹೋದರಿಯ ಕಾಳಜಿ, ಸಹೋದರನ ಜವಾಬ್ದಾರಿ, ಹಿತ ಬಯಸುವವರ ನಿಷ್ಪಲ ಮನ, ನೆರೆಹೊರೆಯವರ ಜತನ, ಮತ್ತು ಸಮಾಜದ ಋಣ.ಇವೆಲ್ಲವನ್ನೂ  ಒಂದು ಚೌಕಟ್ಟಿನೊಳಗೆ ತಂದ  ನಂತರವಷ್ಟೇ ನಿಮ್ಮ ಪ್ರಭುದ್ದ  ಮನದೊಳಗೆ,   ಮನೆತನಗಳ  ಗೌರವವನ್ನು ಹಿಮ್ಮಡಿಗೊಳಿಸುವಂತಹ, ಎಲ್ಲರ  ಖುಷಿಯನ್ನು ಪಡಿಮೂಡಿಸುವಂತ, ನಿಮ್ಮ ಮನಸನ್ನು  ಉಣಬಡಿಸುವಂತ  ಹೆಮ್ಮೆಯ ಒಲವೊಂದು ಅಡಿಹಿಡಲು ಸಾದ್ಯ.

Friday, April 10, 2015

ಸಿಡಿಮದ್ದು ತುಂಬಿದ ಎದೆಯ ಮುಂದೆ ಸುಡುಗಣ್ಣು ಬಿಟ್ಟು ನಿಂತವಳೇ

ನನ್ನ ಸೆಳೆವ ನೋಟವದು ನಿನ್ನ ತಪ್ಪಲ್ಲ  ಆ ಚೆಲುವ ಕಣ್ಣಿನದು,

ಮನ  ಎಳೆವ ಕಾಟವಿದು ನನಗು ಒಪ್ಪಲ್ಲ ಒಲವೆ ಅಂತಹದು.

ಕದಲದ ಕಣ್ಣುಗಳವು ತುದಿ ಬೆರಳ ಗೋಲಿಯಂತೆ,
ಬದಲಾಗದ ಮನವದು ಹದಿ ಹರೆಯದಲೂ  ಪೋಲಿಯಂತೆ.

ನಾ ಎತ್ತ ಹೊರಟರು ನಿನ್ನೆಡೆಗೆ ಎಳೆಯ ತೊಡಗಿದೆ  ನನ್ನ ಪ್ರತಿ   ಹೆಜ್ಜೇನು,

ನಿನ್ನ  ಒದ್ದೆ ತುಟಿಯ ಮುಂದೆ  ನಾ ನಿಂತು ನೋಡುವ ಮತಿಗೆಟ್ಟ ಹೆಜ್ಜೇನು.

ಎದುರಾಗಬೇಡ ಹುಡುಗಿ ಪದೇಪದೆ ಯಾರನ್ನೋ ಕಾದು ಕುಳಿತಂತೆ

ಎದೆಯೊಳಗೆ  ಹುಟ್ಟತೊಡಗಿವೆ  ಹಗಲುಗನಸುಗಳು ನಿನ್ನನ್ನೆ ಕುರಿತಂತೆ.

ಒಲವಾಗಿ ಹೋಗಿರುವ ಅಪಾಯವಿದು ವಹಿಸಬೇಕಾಗುತ್ತದೆ ಎಚ್ಚರಿಕೆ ,
ಒಲ್ಲೆಯನುವ  ಆಗಿಲ್ಲ ನೀ   ಬರೆಯಬೇಕಿದೆ ಮುಚ್ಚಳಿಕೆ.....

Thursday, September 18, 2014

ಮ(ಹಾ)ನದಿ ತಳಮಳ


ಕಾಡುವ ಹುಡುಗಿಗೆ ಕಾದಿದೆ ಮನ, ಕಾಡುವ ಹುಡುಗಿಗೆ ಕಾದಿದೆ ಮನ, ಮನ.......  
ಕಾಡುವ ಹುಡುಗಿಗೆ ಕಾದಿದೆ ಮನ,ಕಾಡುವ ಹುಡುಗಿಗೆ ಕಾದಿದೆ ಮನ.
ನೋಡಬಲ್ಲನೆ ಒಂದು ದಿನ, ಅವಳೊಂದಿಗೆ ನಡೆಯಬಲ್ಲನೆ ಅನುಕ್ಷಣ //
ಕಾಡುವ ಹುಡುಗಿಗೆ ಕಾದಿದೆ ಮನ.......
ಕಾದು ಕುಳಿತ ಮನದ ತಳಮಳ ಎದೆಯೋಳಗಿಂದು ಹಾಡುತಿದೆ,//
ಕನಸ ಕಾಣದ ಕಣ್ಣುಗಳೊಳಗೆ ಅವಳನೇ ಬಿಂಬಿಸೋ ಹಠವಿದೆ 
ಎದುರಾಗುವಳೋ ಅವಳು ಎದೆ ಸೇರುವಳೋ ಅವಳು 
ಎಲ್ಲಿ ಹುಡುಕಲಿ  ಅವಳ ನಾ , ಅವಳಲಿ...  ಹೇಗೆ ತಿಳಿಸಲಿ ಒಲವನ! (ಕಾಡುವ ಹುಡುಗಿಗೆ )

ಸಾವಿರ ಮನಗಳು ಸನಿಹವಿದ್ದರು ಅವಳದೇ ಚಿಂತೆ ಕಾಡುತಿದೆ //
ಕಾಣದ ಊರಲಿ ಕಾಡುತ ಹೀಗೆ ಕುಳಿತವಳು ಅವಳಂತೆ 
ಅಸ್ಪಷ್ಟತೆ...,ಅಪರಿಚಿತತೆ..., 
ಕೂಗಿ ಕರೆದಿದೆ ನನ್ನ ಎದೆ  , ಹಾಗೆ ನೀ ತಿರುಗಿ ಹೋದೆಯ ಗುರುತಿಸದೆ..  (ಕಾಡುವ ಹುಡುಗಿಗೆ)

ಹಗಲು ಬೆಳಕಿನಲ್ಲಿ ಹೊಳೆಯಲೊರಟಿರುವ ಮಿಂಚುಹುಳುವು ನಾನು 
ಒಮ್ಮೆಯಾದರು, ಒಮ್ಮೆಯಾದರು, ಒಮ್ಮೆಯಾದರು   ನಿನ್ನ ಮುಂದೆ ಹೊಳೆಯ ಬಲ್ಲನೆನು  
ಹಗಲು ಬೆಳಕಿನಲ್ಲಿ ಹೊಳೆಯಲೊರಟಿರುವ ಮಿಂಚುಹುಳುವು ನಾನು 
ಒಮ್ಮೆಯಾದರು ಬಣ್ಣದ ಬೆಳಕಲಿ ಸೆಳೆಯಬಲ್ಲನೆನು, ಸೆಳೆಯಬಹುದೇ ನಾನು  ಅವಳ ಬದುಕಿನಲಿ ಉಳಿಯಬಹುದೇ ನಾನು,  ಉಳಿಯಬಹುದೇ ನಾನು,   ಉಳಿಯಬಹುದೇ ನಾನು.

ಜಿ. ಎಸ್. ಶಿವರುದ್ರಪ್ಪರವರ  "ಕಾಣದ ಕಡಲಿಗೆ ಹಂಬಲಿಸಿದೆ ಮನ"  ಭಾವಗೀತೆಯು ಸಿ ಅಶ್ವಥ್ ರವರ  ದ್ವನಿಯಲ್ಲಿ  ಬಹಳ  ಕಾಡಿತು, ಪರಿಣಾಮ  ಈ ಸಾಹಿತ್ಯ. ಬೇಸರಿಸದೆ ಓದಿಕೊಳ್ಳಿ (ಸಿ ಅಶ್ವತ್ ರವರ ರಾಗ ಸಂಯೋಜನೆಯೊಂದಿಗೆ ಗುನುಗಿ ಕೊಂಡರೆ ಸ್ವಲ್ಪ ಹಿಡಿಸಬಹುಬಹುದು )

Monday, February 25, 2013

ಅದೆಷ್ಟೇ ಪ್ರೀತಿಸುವವನ ಎದೆಯಲ್ಲೂ ಅಸೂಹೆ ಹುಟ್ಟಿಸುವಷ್ಟು ನಾ ನಿನ್ನ ಪ್ರೀತಿಸಬಲ್ಲೆ.

ನೀನು ಬೇಡವೆಂದೆ ನಿಂತು ನೋಡುವ ನೋಟ,
ಬೇಕೆಂದೆ ದಿಕ್ಕರಿಸಿ ಹೋಗುವ ಹಠ ,
ಬೆರೆಯಲಾಗದೇ ಬಿಟ್ಟಂತೆ ಆಡುವ  ಆಟ,
ಬೇರೆ ಯಾವುದೇ ಉದ್ದೆಶವಿಲ್ಲದೆಯು ನನಗಿಷ್ಟ.
ನೀ ನಿಂತು ನೋಡುವುದಕ್ಕೆ ಹೇಗೆ ಉದ್ದೇಶಗಳಿಲ್ಲವೊ ಹಾಗೆ ನಾ ಕುಳಿತು ಬರೆಯುತ್ತಿರುವುದಕ್ಕು  ಉದ್ದೇಶಗಳಿಲ್ಲ ಹುಡುಗಿ.
ಇಷ್ಟಕ್ಕೂ ಇಲ್ಲಿನ ಉದ್ದೇಶವದು ಪ್ರೇಮ ನಿವೇದನೆಯೊ ಅಥವಾ ಪರಿಚಯ ಪ್ರದಾನವೋ ಎಂಬುದು ಇನ್ನಷ್ಟೇ ನಿರ್ಧಾರವಾಗಬೇಕಿದೆ
ಅದೇವುದೊ ತ್ರಿಮೂರ್ತಿಯ ಕೋಪಕ್ಕೆ ಸಿಲುಕಿ  ಧರೆಗೆ ಬಿದ್ದ ದೇವತೆಯ ಅಂದಕ್ಕೆ   ಸಾಮಾನ್ಯ ಹೆಸರಿನ, ಸಾದಾರಣ ರೂಪಿನ , ಸರಳ ಜೀವನ ಶೈಲಿಯ, ಸಹನೆ ಎಂದು ಕರೆಸಿಕೊಳ್ಳುವ ಸೋಮರಿತನವುಳ್ಳವನ, ತೀರ ಸಪ್ಪೆ ಅನಿಸಿಕೊಳ್ಳುವ ಭಾವನೆಗಳು  ಬರಹದ ಚೌಕಟ್ಟೋಂದ ನೀಡಲಾರವು ಎಂಬುದು ಎಷ್ಟು ಸತ್ಯವೋ  ಬ್ರಹ್ಮನೇ ಖುದ್ದಾಗಿ ಬಿಡುವು ಮಾಡಿಕೊಂಡು ಕುಳಿತರು ನಿನಗೊಬ್ಬ ಪ್ರತಿಸ್ಪರ್ಧಿಯ ಸೃಷ್ಟಿಸಲಾರ ಅನ್ನುವುದು ಅಷ್ಟೇ ಸತ್ಯ. ಎಂದೆಲ್ಲ ಹುಚ್ಚು ಹೊಗಳಿಕೆಗಳಿಂದ  ನಿನ್ನ ಅನಾವಶ್ಯಕವಾಗಿ ಗೊಂದಲಕ್ಕೀಡು ಮಾಡಿ  ನಾ ಸಾಧಿಸಿಕೊಳ್ಳಬೇಕಾದುದು ಏನು ಇಲ್ಲ  ಗೆಳತಿ. ಇದುವರೆವಿಗೂ ವಾಸ್ತವಗಳ ಜೊತೆ ಬದುಕಿರುವ ನನಗೆ ನಿನ್ನೆಡೆಗಿನ ಅದಮ್ಯ ಕುತೂಹಲಕೊಂದು ಆಕರ್ಷಣೆ, ಆಸೆ, ಆಸಕ್ತಿಯ ಆಕಾರ ನೀಡಲಾಗದಿದ್ದಕೆ ಬಲವಾದ ಕಾರಣಗಳಿವೆ. ಇದುವರೆವಿಗೂ ನಾ ಏನನ್ನು  ಕಳೆದುಕೊಳ್ಳದಿದ್ದರು ಗಳಿಸಿಕೊಳ್ಳಬಹುದಾದ ಹಲವಾರು ಅವಕಾಶಗಳನ್ನು ನಿನ್ನ ನಿರೀಕ್ಷೆಯ ಮುಂದೆ ನಿರ್ಲಕ್ಷಿಸಿ ಕುಳಿತಿದ್ದೇನೆ.
 ಹೆಚ್ಚೆಂದರೆ ಎದುರಿರುವವರೆಗೆ ಕಾಡಿದ ಹುಡುಗಿಯರ ನಡುವೆ ಸದ್ದಿಲ್ಲದೇ ಎದೆಯೊಳಗೆ ಪದ್ಮಾಸನ ಹಾಕಿ ಕುಳಿತುಕೊಂಡ ನಿನ್ನ ಹೊರದೂಡುವ ವ್ಯಕ್ತಿತ್ವವು ನಿನ್ನದಲ್ಲ ಮನೋಬಲವು ನನ್ನಲ್ಲಿ ಉಳಿದಿಲ್ಲ.  ಇತ್ತೀಚಿನವರೆಗು ಎದುರಾದ ಯಾವ ಅಪರಿಚಿತ ಹುಡುಗಿಯರನ್ನು ಬಿಡದೆ ಹಿತವಾಗಿ ಕಾಡಿದ್ದು ನಿಜವಾದರೂ ನೀನಲ್ಲದೆ ಅರೆಗಳಿಗೆಯು ಯಾರನ್ನು ಹಂಬಲಿಸಿದ, ಅರಿವಿಲ್ಲದೆಯು ಇನ್ನೊಬ್ಬರ ಹಿಂಬಾಲಿಸದ, ಅನಿವಾರ್ಯಕ್ಕು ಬೇರೊಬ್ಬರ ಬೆಂಬಲಿಸದ, ಅಪಾರ್ಥವಾಗಿ ಅವರಿವರನ್ನು  ಸಂಭಾಳಿಸದ, ಅನುಕೂಲಕ್ಕಾಗಿಯು  ಅನುರಾಗವದು ಸಂಭವಿಸದ, ಅಗತ್ಯಕಿಂತ ಅನಾವಶ್ಯಕವಾಗಿ ಸಂಭಾಸಿಸದ ಬದುಕು ನನ್ನದು.
ಚೂರು ಬೇಸರಿಸಿಕೊಳ್ಳದೆ ಇಡೀ ಜಗತ್ತನ್ನು ಪ್ರೀತಿಸಿದವನು ನಾನು, ಒಲವಿನ ಹತ್ತಾರು ಮುಖಗಳನ್ನು ತೀರ ಹತ್ತಿರದಿಂದ ನೋಡಿದ ಬಳಿಕ ಅನಿಸಿದ್ದು ಇಷ್ಟೇ " ಎಲ್ಲರನ್ನು ಪ್ರೀತಿಸಲು ಅರಿಯದವ ಯಾರನ್ನು ಪ್ರಿತಿಸಲಾರ" ಏಕೆಂದರೆ ಪ್ರೀತಿ ಎಂಬುದು ಗುರುವಾಗಬಲ್ಲದೆ ಹೊರತು ಗುರಿಯಾಗಲೋಲ್ಲದು. ಇದೇನೇ ಇದ್ದರು ಅದೆಷ್ಟೇ ಪ್ರೀತಿಸುವವನ ಎದೆಯಲ್ಲೂ ಅಸೂಹೆ ಹುಟ್ಟಿಸುವಷ್ಟು ನಾನು ನಿನ್ನ ಪ್ರೀತಿಸಬಲ್ಲೆ. ನಿನ್ನ ಪ್ರೀತಿಸಿದ ಪ್ರಖರತೆಯಲ್ಲೆ ಸಾಮಾಜಿಕ ಚೌಕಟ್ಟನ್ನು ಮೀರದೆ ಇತರರನ್ನು ಪ್ರೀತಿಸಬಲ್ಲೆ .
ಹಲವಾರು ಹಿತನಿರೀಕ್ಷಿತರು ನನ್ನಲೊಂದು ನಂಬಿಕೆಯ ಖಾತೆ ತೆರೆದು ಅವರ ಪರಮ ರಹಸ್ಯಗಳ  
ಠೇವಣಿಗಳ ಇಟ್ಟಿದ್ದಾರೆ. ಇಲ್ಲಿ ಯಾರದೋ ಕನವರಿಕೆಗಳಿಗೆ ಕಿವಿಯಾಗಿದ್ದೇನೆ, ನೋವುಗಳಿಗೆ ದ್ವನಿಯಾಗಿದ್ದೇನೆ, ಪ್ರಯತ್ನಗಳಿಗೆ ಜೋತೆಯಾಗಿದ್ದೇನೆ ಅನ್ನುವುದನ್ನು ಹೊರತುಪಡಿಸಿ ಅನುಮಾನಸ್ಪದವಾಗಿ ಸಹ ನಾನು ಬದುಕಿದ್ದು ಕಡಿಮೆ.
ಪರಿಚಿತಗೊಂಡ ಪ್ರತಿಯೊಬ್ಬರನ್ನು ಸಾಮಾಜಿಕ ಗೌರವ ಹೆಚ್ಚಿಸುವಂತೆ ನಡೆಸಿಕೊಳ್ಳುವುದು ನನಗೆ ಹುಟ್ಟಿನಿಂದಲೇ ಬಂದ ಅನುವಂಶಿಯ ಖಾಯಿಲೆ. ಶತ್ರುವನ್ನು ಸಹ ಅಹಿತಕಾರಿಯಾಗಿ ನಡೆಸಿಕೊಳ್ಳದ ಮಣ್ಣಿನ ಜನತೆಯ ಗುಣ ನಿನ್ನಷ್ಟಲ್ಲದಿದ್ದರು ಇತರರಂತೆ ನನ್ನಲ್ಲಿಯೂ ಸಹಜವಾಗಿ  ಬೆಳೆದುಬಂದಿದೆ, ಆದರೆ ಇತರರ ಹಣಕ್ಕೆ ಕೊಟ್ಟ ಬೆಲೆ, ಮನಸ್ಥಿತಿಗೆ ನೀಡಿದ ಪ್ರಾಮುಖ್ಯತೆ ನಾನಗಾಗಿ ಕೊಡಲಾಗುತ್ತಿಲ್ಲ ಅನ್ನುವುದು ಒಳ್ಳೆಯಾದೊ ಕೆಟ್ಟದ್ದೋ ನಿರ್ಧರಿಸಲಾಗುತ್ತಿಲ್ಲ.


ನನ್ನ ನಂಬಿಕೆಯೊಳಗೆ ಇರುವ ಏಕಮಾತ್ರ ದೇವನು ನಾನು ಗಳಿಸಿಕೊಳ್ಳಲಾಗದ್ದೆಲ್ಲವನ್ನು ಯಥೇಚ್ಚವಾಗಿ ಕೊಟ್ಟು ಉಳಿದಿದ್ದಕ್ಕೆ ಇಡಿ ಬದುಕ ಕರುಣಿಸಿದ್ದಾನೆ. ಬದುಕಿನಲ್ಲಿ ನಿನ್ನ ಇರುವಿಕೆಗಿಂತ ಹಿರಿದಾದ ಉಡುಗೊರೆ  ಇನ್ನ್ಯಾರಿಂದ  ತಾನೆ ಕೊಡಲು ಸಾದ್ಯ ಹೇಳು. ಬದುಕಿನ ವಯೋ ಸಹಜ ವೈಯಕ್ತಿಕ ಅವಶ್ಯಕತೆಗಳಿಗೆ ನೀನಲ್ಲದೆ ಇನ್ನ್ಯಾರೊ  ಸಿಕ್ಕುತ್ತಿದ್ದರು, ದಕ್ಕುತ್ತಿದ್ದರು, ಆಸಕ್ತಿ ತೋರಿದ್ದರೆ ಅವಕಾಶಗಳಿಗೇನು ಕೊರತೆಯೇನಿರಲಿಲ್ಲ. ಆದರೆ ನನಗೆ ಮನಸಿಗೊಬ್ಬ ಸಂಗಾತಿಯಲ್ಲದೆ ಮನೆಗೊಬ್ಬ ಸೊಸೆ, ಮನೆ ಮಂದಿಗೆಲ್ಲ ಮಗಳು ಬೇಕಾಗಿದೆ. ನನ್ನ ಮನೆತನವ ಹತ್ತಿರದಿಂದ ನೋಡಿದ ಪ್ರತಿ ಹುಡುಗಿಯ ಮನದಲ್ಲೂ ನನಗು ಇಂಥ ಕುಟುಂಬದಲ್ಲಿ ಹುಟ್ಟಬೇಕಿತ್ತು, ಬೆಳೆಯಬೇಕಿತ್ತು ಅಥವಾ ಬದುಕಬೇಕಿತ್ತು ಅನಿಸಿದ್ದರೆ ಅತಿಶಯೋಕ್ತಿಯಲ್ಲ. ಇಷ್ಟಕ್ಕೂ ಸೀಮೆಯಲ್ಲಿ ಇಲ್ಲದ ಸ್ಥಿತಿವಂತ ಕುಟುಂಬವಲ್ಲದಿದ್ದರೂ ನನ್ನದು ಶ್ರೀಮಂತ ಕುಟುಂಬ. ಇಲ್ಲಿ ಸುಖ, ಸಂತೋಷಗಳ ಆಚರಣೆಗೆ ವೇದಿಕೆ ಇರುವಂತೆ ಕಷ್ಟವೆಂದು ಅಂದುಕೊಳ್ಳಲು ಬಿಡದಂತೆ ಅನಿತುಕೊಳ್ಳುವ ಹೆಗಲುಗಳಿವೆ, ಮಬ್ಬುಗವಿಯದಂತೆ ಮನಸಿನ ಮುಂದೆ ಭರವಸೆಯ ಹಗಲುಗಳಿವೆ.
ನನ್ನ ಕೂಡು ಕುಟುಂಬದ ಒಲವಿನ ಹೊಳೆಗೆ ನನ್ನ ನಿನ್ನಂತ ಅನೇಕ ಅಣೆಕಟ್ಟುಗಳಿವೆ ಗೆಳತಿ. ಇಲ್ಲಿ ಪ್ರವಹಿಸುತ್ತಿರುವ ಮಂತ್ರಜಲದ ವಿಶಾಲ ಹರಿವಿನಲಿ ಹಸನಾಗದ ಬದುಕ್ಯಾವುದು. ನಂಬಿಕೆಯ ನೆಲದಲ್ಲಿ ಪ್ರೀತಿಯ ಬಿತ್ತಿ ಅಜೀವ ಸಾಮರಸ್ಯ ಬೆಳೆಯನ್ನು ವ್ಯವಸಾಹಿಸೋಣ . ಯಾವುದೊ ಹಳದಿ ಲೋಹವೊಂದಕ್ಕೆ ನಮ್ಮಿಬ್ಬರನ್ನು ಬೆಸೆಯಬಲ್ಲ ಸಾಂಪ್ರದಾಯಿಕ ನೈತಿಕತೆ ಇದೆಯೇ ಹೊರತು ಕೌಟುಂಬಿಕ ಜವಾಬ್ದಾರಿಗಳ ಆಳ ಅಗಲಗಲ ಅರಿವಿರುವುದಿಲ್ಲ . ಇಲ್ಲಿ ನಮ್ಮ ವಿಶ್ವಾಸದ ವಿಶಾಲ ಬಾಹುಗಳ ತೆಕ್ಕೆಯೊಳಗೆ ಬದುಕು ದಿನಂಪ್ರತಿ ಮೈ ಮುರಿದು ಏಳಬೇಕು ಮೈ ಮರೆತು ಮಲಗಬೇಕು. ಕೆಲವೇ ದಿನಗಳಲ್ಲಿ ಸಂಪೂರ್ಣ ಪರಿಚಯವಾಗಲಿರುವ ನಾವು ಪರಸ್ಪರ ಪರಿಪೂರ್ಣವಾಗುವುದೇ ವೈವಾಹಿಕತೆ ಎಂಬುದು ನನ್ನ ಅಭಿಪ್ರಾಯ.

ತಣ್ಣನೆಯ ಕಣ್ಣ ಸುಡುವ ನೋಟದ ಮುಂದೆ ನನ್ನ ಕೂರಿಸಿ ಬದುಕಿನ ಯಾವ ಗಳಿಗೆಯಲ್ಲಿ ಕೇಳಿದರು ನಿನ್ನ ಕುತೂಹಲದ ಕಣ್ಣುಗಳ ಕುರಿತೇ ಕಾದಂಬರಿಯೊಂದ ಬರೆದುಕೊಡಬಲ್ಲೆ ಹುಡುಗಿ. ಇದ ಮೀರಿ ನನ್ನೊಳಗೆ ಒಂದು ಮಹಾಕಾವ್ಯಕ್ಕಾಗುವಷ್ಟು ನಿನ್ನನ್ನು ಅಧ್ಯಯನ ಮಾಡಬೇಕು ಎಂಬ ಹಟವಿದೆ. ದಣಿವಿಲ್ಲದ ಎದೆಯ ಚಲವು, ಧ್ವನಿಯಿಲ್ಲದ ವಿದೇಯ ಒಲವಿಗೆ   ಶರಣಾಗತೊಡಗಿದರೆ ಪದ ಪತ್ರವಾಗುವುದು, ಪತ್ರ ಪ್ರಬಂಧವಾಗುವುದು ಎಷ್ಟೊತ್ತಿನ ಮಾತು.............
 "ನಿನ್ನ ಕಣ್ಣೊಳಗಿನ ಕೇಳಲಾಗದ ಪ್ರಶ್ನೆಗಳಿಗೆ
 ನನ್ನ ಎದೆಯೊಳಗೆ ಹೇಳಲಾಗದ ಉತ್ತರಗಳಿವೆ ಹುಡುಗಿ,
ನನ್ನ ಕಡುಗಪ್ಪು ಬಣ್ಣದ ಬದುಕಿನ ಖಾಲಿ ಹಾಳೆಯೊಳಗೆ
ಸಣ್ಣ ಖಾಸಗಿತನವೆಂಬ ಕಾಮನ ಬಿಲ್ಲಿನ ಚಿತ್ತಾರಗಳಿವೆ ಅಡಗಿ."


ಅಸ್ಪಷ್ಟ, ಅಪರಿಚಿತ, ಅನಾಮಿಕತೆಗೂ  ಹಸಿರು ಹಾಸಿ ಕಾದವನು

Saturday, August 25, 2012

ಈ ಹುಡುಗನ ಪ್ರೀತಿ ಕಾಣದಿರೋ ಹುಡುಗಿ ನೀ ಪಾಪಿ ಕಣೇ

ಒಲವ ಒದ್ದು ಎದ್ದು ಹೋದೆಯಲ್ಲೇ ನೀನು,
ನೀ ಹೋದ ಮೇಲೆ ಅಲ್ಲವೇ ಬದುಕು ಸವಿಜೇನು. ||
ಹೃದಯವೇ ಅವಳಿಗಾಗಿ ಮಿಡಿದೆ,  ಅವಳಿಲ್ಲದೆಯು ಬದುಕಲ್ಲಿ ಸುಖವಿದೆ. (ಒಲವ ಒದ್ದು )

 

ಜೀವನವೆಲ್ಲ..... ಅವಳನ್ನೇ, ಪ್ರೀತಿಸಲೆಂದು  ಬಂದೆ ನಾನು.
 ಜೀವನದಲೆಂದು ನನ್ನನ್ನ, ಪ್ರೀತಿಸದ ವಂಚಕಿ ನೀನು.
ನೀನಿಲ್ಲದೆಯು  ಬದುಕು ಇಷ್ಟ,  ಹೇಳೇ ಇದು ಯಾರಿಗೆ ನಷ್ಟ
ನಿನಗಿಂತ  ಸುಂದರ ಜಗವು (ಒಲವ ಒದ್ದು )

ನನ್ನ ಬಯಸಿ ಮುಂದೆಂದೋ, ನಿನ್ನ ಬದುಕು ಕೊರಗುವುದು.
ನಿನ್ನೀ ಪ್ರೀತಿಯ ಹುಸಿಯಂತೆ, ನನ್ನ ಮನಸು ಕರಗುವುದು.
ಪ್ರೀತಿ ಇದ ಗುರುತಿಸದ ಹುಡುಗಿ ನೀ ಪಾಪಿ ಕಣೆ
ನಿನ್ನೆಗಿಂತ  ಹೆಚ್ಚಿದೆ ನನ್ನ ನಗುವು (ಒಲವ ಒದ್ದು )

(ಒಲವಿನ ಉಡುಗೊರೆ ಕೊಡಲೇನು ಹಾಡಿನ  ರಾಗಕ್ಕೆ ಬದಲಾದ  ಸಾಹಿತ್ಯ)

Sunday, July 22, 2012

ನೀ ಬಿಟ್ಟು ಹೋದ ಬದುಕಿಗೆ ಇಟ್ಟ ಹೆಸರು ಸುಧೀರ್ಘ ಆತ್ಮಹತ್ಯ,

ನೀ ಬಿಟ್ಟು ಹೋದ ಬದುಕಿಗೆ ಇಟ್ಟ ಹೆಸರು ಸುಧೀರ್ಘ ಆತ್ಮಹತ್ಯ,
ನಾ ಕಟ್ಟಿಕೊಂಡ ಒಲವಿಗೆ ಸಾವೇಇಲ್ಲ ಬದುಕಲು ಮತ್ತೆ,ಮತ್ತೆ.......

ಸುಡುಗಾಡ ಬೂದಿಯದು  ಸುಳಿಯುತ್ತಿದೆ ಬೇಡವೆಂದರೂ ಸುಳಿಯಂತೆ,
ಮರುಭೂಮಿಯಿದು ಮರು-ಭೂಮಿಯಾಗುವ ಕನಸಿಗೆ ನೀ  ಮಳೆಯಂತೆ.

ಆಕಾಶದಗಲಕ್ಕು ಅವಕಾಶಗಳಿವೆ  ಎಲ್ಲಾದರು ಇಳಿದುಬಿಡು ಮಂತ್ರಜಲವೇ,
ಅಲ್ಪಯುವಾಗಲೋಲ್ಲದ ಅನುರಾಗಿಯ ಕೊರಗಲ್ಲವಿದು, ಆಮಂತ್ರಣ ಒಲವೆ.

ಬಾ ... ಬಂದಾದ ಮೇಲೆ ಮರೆತು ಬಿಡು ನೀ ಹಿಂದಿರುಗುವ  ದಾರಿಯ
ಬಯಕೆಯಲ್ಲ ಭಯವಿದು, ಕರುಣೆತೋರಿ ಕರುಣಿಸದಿರಲೆಂದು ಈ ಪರಿಯ

Friday, July 20, 2012

ಅರೆಗಳಿಗೆಯಾದರು ಬಂದು ಹೋಗಿದ್ದರು ನನಗದು ಮುಗಿಯದ ಬುತ್ತಿ,

ನೀ ಬಿಟ್ಟು ಹೋಗುವ  ನೆನಪುಗಳು ಕತ್ತಲನೆ ಉಳಿಸಿ ಬೆಳಗಬೇಕು ಸೊಡರಾಗಿ,
ಜೊತೆ ಇಟ್ಟು ಬರುವ  ಹೆಜ್ಜೆಗಳು ಕೊನೆಯವರೆಗೂ ಕಾಲ, ಕಾಡಬೇಕು ತೊಡರಾಗಿ.

ಪ್ರತಿ ಬಾರಿಯೂ ವಿಧಾಯವ ಹೇಳುವ ನಿನ್ನ ಕಣ್ಣುಗಳು ನಿರ್ದಯವಾಗಿ ನನ್ನ ಅನುದಿನವು ಕೊಲ್ಲಬೇಕು,
 "ಮೊದಲು ಹುಟ್ಟಿದ್ದು ನಿನ್ನ ಪ್ರೀತಿ ನಂತರ ನಾನು" ಅನ್ನಬಹುದಾದ  ಅಸಂಬದ್ದ ಹೇಳಿಕೆಯೊಂದು ಇನ್ನ  ಅಜೀವವಾಗಿ  ನಿಲ್ಲಬೇಕು.

ವಶಕಿಟ್ಟುಕೊಳ್ಳುವ  ನಿನ್ನ ನೆನಪುಗಳ ಒಳಗೆ ನಾ ನರಳಬೇಕಿತ್ತು,
ವಿಷವಿಕ್ಕದೆ ಕೊಲ್ಲುವ ಕಣ್ಣ ಹೊಳಪುಗಳಿಗೆ ಸಿಲುಕಿ ಮರಳಿದರೆ ಸಾಕಿತ್ತು.

ಕೆಲವು ದಿನವಾದರೂ ಮನದ ಕೋಣೆಯ ಬಾಡಿಗೆಗೆ ಹಿಡಿದು ನೀ ಉಳಿಯಬೇಕಿತ್ತು,
ಒಲವು ಕ್ಷಣವಾದರೂ ಅಂಗಳದಲ್ಲಿ ಅರಳಿ ಬಾಡದ ಹಾಗೆ ಮುಡಿದು ನಲಿಯಬೇಕಿತ್ತು.
ಅರೆಗಳಿಗೆಯಾದರು   ಬಂದು ಹೋಗಿದ್ದರು ನನಗದು ಮುಗಿಯದ ಬುತ್ತಿ,
ಮರಗುಳಿಯೇ ಆದರು ನೀನ್ನಲ್ಲಿಯೇ ಸೇರುತ್ತಿದ್ದೆ ಎಲ್ಲಾದರೂ ಸುತ್ತಿ.