Wednesday, April 25, 2012

ನಿಮ್ಮ ಭಾವಕೋಶಗಳ ಮುಂದೊಂದು ಮನವಿ


ನನ್ನ ನಡೆ ಎಂದಾದರೂ ನಿಮ್ಮಲ್ಲಿ ಮುಜುಗರ ತಂದಿದ್ದರೆ,
ಒಡನಾಟವೆನಾದರು ಬೇಸರಕ್ಕೆ ಕಾರಣವಾಗಿದ್ದರೆ,
ಮಾತ್ಯವುದೋ ನಿಮ್ಮ ಮೌನವಾಗಿಸಿದ್ದರೆ,
ಬದುಕಿದು ನಿಮ್ಮ ಭಾವನೆಗಳ ಅಸ್ತವ್ಯಸ್ತಗೊಳಿಸಿದ್ದರೆ,
ಅದಕ್ಕಾಗಿ ಕ್ಷಮೆ ಇರಲಿ..... ತಪ್ಪು ಮಾಡುವವರು ಮಾಡುತ್ತಾ  ಕಲಿಯುತ್ತ ದೊಡ್ಡವರಾದರೆ, ಅದ ಕ್ಷಮಿಸುತ್ತಾ  ತಿದ್ದುತ್ತಾ  ದೇವರಾಗುವವರು ನೀವಲ್ಲವೆ.....

Monday, April 16, 2012

ಜನುಮದಿನ

ಹುಟ್ಟು ಹಬ್ಬವೆಂದರೆ ಸೂರ್ಯನ ಸುತ್ತಿ ಬರುವ ಸಂಭ್ರಮ,
ಈ ಪಥದ ಪ್ರತಿ ಹೆಜ್ಜೆಯಲು ನಲುವಿರಲಿ,
ಎದುರಾಗುವ ಎಲ್ಲಾ ತಿರುವಿನಲು ಗೆಲುವಿರಲಿ,
ಹಗಲುರಾತ್ರಿಗಳ  ಆಚರಣೆಗಳಲೆಲ್ಲ   ಚೆಲುವಿರಲಿ,
ಬದುಕು ಪರಿಚಯಿಸಿಕೊಂಡ ಸಂಬಧಗಳಲೆಲ್ಲಾ  ಒಲವಿರಲಿ.
ಜನುಮದಿನದ ಶುಭಾಶಯಗಳು
                                                  ಹಿತೈಷಿ
 

Friday, April 13, 2012

'ಜಗತ್ತಿನ ಮತ್ತ್ಯಾವ ಜೀವದಿಂದಲೂ ಕೂಡ ನಿನ್ನನ್ನು ನನ್ನಷ್ಟು ಪ್ರೀತಿಸಲಾಗುವುದಿಲ್ಲ'








ಬದುಕೆಲ್ಲಾ ನಿನ್ನನ್ನೇ ಪ್ರೀತಿಸುವವನನ್ನ ನೀನು ಕಳೆದುಕೊಂಡೆ, ಬದುಕಲ್ಲಿ ಎಂದು ನನ್ನನ್ನ  ಪ್ರೀತಿಸದವಳ ನಾನು ಕಳೆದುಕೊಂಡೆ, ಇಲ್ಲಿ ಯಾರೆಷ್ಟು ಕಳೆದುಕೊಂಡರು ಅನ್ನುವುದಕ್ಕಿಂತ  'ಜಗತ್ತಿನ ಮತ್ತ್ಯಾವ ಜೀವದಿಂದಲೂ ಕೂಡ ನಿನ್ನನ್ನು ನನ್ನಷ್ಟು ಪ್ರೀತಿಸಲಾಗುವುದಿಲ್ಲ'  ಅನ್ನುವುದು ನನ್ನನ್ನು  ಹೆಚ್ಚು ನೋವಿಗೀಡುಮಾಡಿದೆ.

Thursday, April 12, 2012

ಬಹು ದೊಡ್ಡ ಸಮಾಧಾನ

ಇದುವರೆಗಿನ ಬದುಕು ನಿನ್ನನ್ನು ಅಪರಿಚಿತವಾಗಿರಿಸಿದೆ ಅನ್ನುವುದೊಂದೇ ನನಗೆ ಬಹು ದೊಡ್ಡ ಸಮಾಧಾನ

Saturday, April 7, 2012

ಬಂದಿದೆಂದು? ಜಾರಿಗೆ!

ಕಣ್ಣೊಳಗೆ ಹಚ್ಚಿಟ್ಟ ಹಣತೆ ಕಾದಿರುವುದಾದರು ಯಾರಿಗೆ?
ನಿರೀಕ್ಷೆಗಳಿಲ್ಲದ ನಿಶ್ಕಲ್ಮಸ ನಗು ಬಂದಿದೆಂದು?  ಜಾರಿಗೆ!
ನಿನ್ನ ತಣ್ಣನೆಯ ಕಣ್ಣ ಸುಡುವ ನೋಟ! 
ನಿನ್ನ ನಿನಾದದ ನಗು, ನಿಟ್ಟುಸಿರಿನ ಅಳು, ನಿರರ್ಗಳ ಮಾತು, ನೀರವ ಮೌನ, ನೀರಾಗುವ ನಾಚಿಕೆ, ನಿರುಪದ್ರವಿ ಕೋಪ, ನಿಷ್ಕಲ್ಮಶ  ನಡೆ, ನಿರಹಂಕಾರಿ ಮನ,ನಿಸ್ವಾರ್ಥ  ಸ್ವಾಭಿಮಾನ, ನಿಲುಕದ ಸಲುಗೆ, ನಿಷ್ಪ್ರಯೋಜಕ  ಆಕರ್ಷಣೆ, ನಿರ್ವಿವಾದ ಜ್ಞಾನ,  ನಿರಾತಂಕ ನಾಳೆ, ನಿರೀಕ್ಷಿತ ಬದುಕು,    ಇವೆಲ್ಲ ನನಗೆ ಅರ್ಥವಾಗುತ್ತವೆ ಹುಡುಗಿ. ಆದರೆ ಇದುವರೆವಿಗೂ ಅರ್ಥವಾಗದೆ ಇರುವ ಒಂದೇ ಒಂದು ಸಂಗತಿ ಎಂದರೆ ಅದು ನಿನ್ನ ತಣ್ಣನೆಯ ಕಣ್ಣ ಸುಡುವ ನೋಟ! 

Thursday, April 5, 2012

ಈ ಬರಹ ನೀ ಓದುವುದ ವಿರೋದಿಸುತ್ತದೆ

ನನ್ನೀ ಆಕರ್ಷಣೆ ಕಳೆದುಕೊಂಡ ಗೆಳೆತನ ,ಅನಾರೋಗ್ಯವ ಎಳೆದುಕೊಂಡ ಜೀವನ,ಆಟಕಿದ್ದು ಲೆಕ್ಕಕಿಲ್ಲದಂತಾದ ಸ್ವಾಭಿಮಾನ, ಅಲೆಮಾರಿಯಾಗಿ ಹೋದ ಧ್ಯಾನಸಿಕ್ತ ಮನ ಇದೆಲ್ಲದಕ್ಕೂ ಕಾರಣಳಾಗಿಯು ದೂರಾದ ನಿಶ್ಚಿಂತೆ ನಿನಗಿದ್ದರೆ  ಬರಹ ನೀ ಓದುವುದ ವಿರೋದಿಸುತ್ತದೆ

ಕ್ಷಮಿಸಿಬಿಡು ಈ ಬರಹ ನಿನಗಲ್ಲ

ನಿನ್ನ ಸುಖದ ತೇಗುಗಳಿಂದ ನನ್ನ ನೆನಪದು ಕುಂದಿದ್ದರೆ, ಅವನ ಮುಖದ ಬೀಗುಗಳ ನಿನ್ನ ಮನಸದು ಹಂಚಿ ತಿಂದಿದ್ದರೆ, ಮೌನದ  ಈ ಕೂಗುಗಳಿಗೆ ಮನಸದು ಪ್ರತಿಕ್ರಿಯಿಸದ ಬೆಲೆ ಸಂದಿದ್ದರೆ, ಗೆಳೆತನವಿದು ತಲೆ ಬಾಗುವಂತೆ ನಡೆದದ್ದಾದರೂ ನಿನ್ನ  ಮುಂದಿದ್ದರೆ  ಕ್ಷಮಿಸಿಬಿಡು ಈ ಬರಹ ನಿನಗಲ್ಲ

ಪ್ರೀತಿ ಇಂದು ಹೆಣವಾಗಿದೆ

ಸಾವಿನ ಮನೆಯಾಗಿರುವ ಬದುಕಿನಲಿ ಪ್ರೀತಿ ಇಂದು ಹೆಣವಾಗಿದೆ
ಸಾವಿರ ಬಣವಾಗಿರುವ ಕನಸಿನಿಂದ ಮನ ಯುದ್ದದಾಹಿಗಳ ಕಣವಾಗಿದೆ

ನಿನ್ನ ತಾಕಲು ಇಲ್ಲ

ಹೂ ಅರಳುವಾಗ ಆತುರದಲ್ಲಿ ನಿನ್ನ ಕನಸು ಕಂಡಿರಬೇಕು ಹಾಗಾಗಿ ಅದು ನಿನ್ನಂತಾಗಲಿಲ್ಲ
ಬರಹವಿದು ಬಹುದಿನದಿಂದ ನಿನ್ನ ಬಂದಿಸಬೇಕೆಂದಿತ್ತು ಆದರಿದು ನಿನ್ನ ತಾಕಲು ಇಲ್ಲ

Wednesday, April 4, 2012

ಅಪ್ಪ I love you so much

ತನ್ನ ಅನೇಕ ಒತ್ತಡಗಳ ನಡುವೆಯೂ ನನ್ನ ಬದುಕ ರೂಪಿಸುವ ಒಲವ ಇನ್ನಿಲ್ಲದಂತೆ ರೂಡಿಸಿಕೊಂಡಿರುವ ಅಪ್ಪ,
ಅಪ್ಪ  I  love  you so much.....

ಅಮ್ಮ I love you

ನನ್ನಲ್ಲಿರುವ  ಕೆಟ್ಟದೆಲ್ಲವ ಹೊರತು ಪಡಿಸಿ ಉಳಿದದ್ದರ ಸಾವಿರದಷ್ಟು ಮೊತ್ತದ ಒಟ್ಟು ರೂಪವೇ ಅಮ್ಮ
                                                                                                ಅಮ್ಮ  I  love  you........

ಗೆಳತಿ ನೀ ಬರುವುದು ತಡವೇ ?

ಅಂತ್ಯ ಕಾಣದ ಮುಗುಳುನಗು ನಿನಗೆ ದೈವವಿತ್ತ ಒಡವೆ,
ಅಂತರ್ಮುಖಿಯಾದ ನೀ ಸದಾ ಗುಪ್ತಗಾಮಿನಿಯ ದಡವೇ,
ಆಕಾಶವೇ ಜಾರಬಹುದು ಹುಡುಗಿ ನಿನಗಿಲ್ಲದಿದ್ದಾಗ ಬೇರಾರ ಗೊಡವೆ
ಅಣಿಗೊಂಡು ಕೇಳುತಿದೆ ಬದುಕು, ಗೆಳತಿ ನೀ ಬರುವುದು ತಡವೇ ?

ಮನತುಂಬಿ ನೀ ಬರುವಾಗ

ಕಾವಲಾಗಿರಲಿ ಹಗಲಿರುಳು ಸೂರ್ಯ ಚಂದ್ರ ನಕ್ಷತ್ರ.
ಕತ್ತಲಲಿ ನೆರಳಾಗಿ, ಹಗಲಲಿ ಬೆಳಕಾಗಿ ಸರಿದು ಬಾ ನನ್ನತ್ರ

ಎದುರು ನಿಲ್ಲಲಿ ಬೇಕಾದರೆ ಇಡೀ ಪರ್ವತ ಶಿಖರ ಗಿರಿ
ಹೆದರಿ ಹೋದಿತು ಈ  ಧರೆ! ನೋಡಿ ಕಣ್ಣೊಳಗಿನ ಗುರಿ

ಸಪ್ತ ಸಾಗರಗಳು ಅಡ್ಡಬರಲಿ ಮನತುಂಬಿ ನೀ ಬರುವಾಗ ನನ್ನೆಡೆಗೆ
ನಾಚಿ ನಿರಾಗುವುದಿರಲಿ, ನೀರೇ ನಾಚಿ ದೂರಾದಿತು ನಿನ್ನ ನಡಿಗೆಗೆ

ಜೀವದಕ್ಕಿ ಹೇಳಿ ಹೋಗುವ ಮುನ್ನ ವಿಧಾಯವ ಗೂಡಿಗೆ
ಬಾವವುಕ್ಕಿ ಬಾ ಗೆಳತಿ ನನ್ನೆದೆಯ ಗುಡಿಗೆ
 
ಸ್ನೇಹವೊಂದು ಸುಂದರ ಜಲಪಾತದಂತೆ, ಇಲ್ಲಿ ನೀರಿಗಾಗಿ ಕಣಿವೆಯೇ ಕಾದು ಕುಳಿತಿತ್ತ? ಅಥವಾ ನೀರೆ ಕಣಿವೆಯೊಳಗೆ ಮುಗಿಬಿತ್ತ ಒಂದು ಗೊತ್ತಿಲ್ಲ! ಅದರೊಂದಂತು ನಿಜ ಎರಡು ದಡಗಳ ನಡುವೆ ಜೀವಂತಿಕೆ ಸೃಷ್ಟಿಸಿ ಹೊರಟಿರುವ ನದಿಯ ಹೆಸರು ಮಾತ್ರ 'ಸವಿ ನೆನಪು'... ನನ್ನೀ ಬದುಕಿನಲ್ಲಿ ಅವಿಸ್ಮರಣೀಯ ನೆನಪುಗಳ ನಿರಂತರ ನದಿಯಾಗಿರುವ ನಿಮಗಾಗಿ ಇ- ಬರಹ
ಯಾವುದೊ ಊರಿನ,ಯಾವುದೊ ಬೀದಿಯ, ಯಾವುದೊ ಮನೆಯೊಳಗಿನಿಂದ ನನ್ನನ್ನು ಎಳೆದು ತಂದು ನಿಮ್ಮನ್ನು ಪರಿಚಯಿಸಿದ ಇ- ಬದುಕಿಗೆ ಮೊದಲು ನಾ ಋಣಿ ....

Tuesday, April 3, 2012

ಮುನಿದ ದೇಹವಿದು ಹೋರಾಡದೆ ಸೋಲುತಿದೆ
    ನೀಳ ಬೆನ್ನ ಮೇಲೆ ಹಟಕ್ಕೆ ಬಿದ್ದ ಜಡೆಗೆ

ಮನದ ದ್ಯಾನವಿದು ಮಾಟಕ್ಕೆ ಸಿಲುಕುತಿದೆ
  ಆ ಮಂತ್ರ ಒಲಿದ ಕಣ್ಣು ಹೊರಳಿದ ಕಡೆಗೆ