ಒಲವ ಒದ್ದು ಎದ್ದು ಹೋದೆಯಲ್ಲೇ ನೀನು,
ನೀ ಹೋದ ಮೇಲೆ ಅಲ್ಲವೇ ಬದುಕು ಸವಿಜೇನು. ||
ಹೃದಯವೇ ಅವಳಿಗಾಗಿ ಮಿಡಿದೆ, ಅವಳಿಲ್ಲದೆಯು ಬದುಕಲ್ಲಿ ಸುಖವಿದೆ. (ಒಲವ ಒದ್ದು )
ಜೀವನವೆಲ್ಲ..... ಅವಳನ್ನೇ, ಪ್ರೀತಿಸಲೆಂದು ಬಂದೆ ನಾನು.
ಜೀವನದಲೆಂದು ನನ್ನನ್ನ, ಪ್ರೀತಿಸದ ವಂಚಕಿ ನೀನು.
ನೀನಿಲ್ಲದೆಯು ಬದುಕು ಇಷ್ಟ, ಹೇಳೇ ಇದು ಯಾರಿಗೆ ನಷ್ಟ
ನಿನಗಿಂತ ಸುಂದರ ಈ ಜಗವು (ಒಲವ ಒದ್ದು )
ನನ್ನ ಬಯಸಿ ಮುಂದೆಂದೋ, ನಿನ್ನ ಬದುಕು ಕೊರಗುವುದು.
ನಿನ್ನೀ ಪ್ರೀತಿಯ ಹುಸಿಯಂತೆ, ನನ್ನ ಮನಸು ಕರಗುವುದು.
ಪ್ರೀತಿ ಇದ ಗುರುತಿಸದ ಹುಡುಗಿ ನೀ ಪಾಪಿ ಕಣೆ
ನಿನ್ನೆಗಿಂತ ಹೆಚ್ಚಿದೆ ನನ್ನ ನಗುವು (ಒಲವ ಒದ್ದು )
(ಒಲವಿನ ಉಡುಗೊರೆ ಕೊಡಲೇನು ಹಾಡಿನ ರಾಗಕ್ಕೆ ಬದಲಾದ ಸಾಹಿತ್ಯ)
No comments:
Post a Comment